ಶ್ರೀ ಸಾಮಾನ್ಯರಿಗಾಗಿ ಸಾಹಿತ್ಯ

ಶ್ರೀ ಸಾಮಾನ್ಯರಿಗಾಗಿ ಸಾಹಿತ್ಯ

ವಿಮರ್ಶೆ
Apr 2025
ಲೇಖಕ ಈ ಪ್ರಪಂಚದ ಶ್ರೀಸಾಮಾನ್ಯರ ಪ್ರತಿನಿದಿ. ಅವನ ಸಾಹಿತ್ಯವೆಲ್ಲವೂ ಸಾಮಾನ್ಯನ ಚಿತ್ರಣವೇ. ಈ ಸಾಮಾನ್ಯ ಮನುಷ್ಯ ಕೇವಲ ಕಷ್ಟ ಪಡುವುದಿಲ್ಲ ಆತ ಬದುಕುತ್ತಾನೆಯೂ ಕೂಡ ಎಂಬ ಅರಿವು ಲೇಖಕನಿಗೆ ಇರಬೇಕು. ಹೃದಯ ಸಂಬಂಧಿ ಪುರಾತನ ಮೌಲ್ಯಗಳಾದ ಶ್ರೀಸಾಮಾನ್ಯನ ಪ್ರೀತಿ, ಗೌರವ, ದುಃಖ, ದುರಹಂಕಾರ, ತ್ಯಾಗಗಳಂಥ ಅಂಶಗಳನ್ನು ಲೇಖಕ ಗೌರವಿಸಬೇಕು. ಜನಸಾಮಾನ್ಯನ ಈ ಅಂಶಗಳಿಲ್ಲದ ಯಾವ ಸಾಹಿತ್ಯವು ತಾತ್ಕಾಲಿಕವಾಗಿರುತ್ತದೆ. ಹಾಗೂ ಸತ್ತು ಹೋಗುತ್ತದೆ' ಎಂದು ಬರೆಯುತ್ತಾರೆ. ಕೇವಲ 114 ಪುಟಗಳ ಹೊತ್ತಿಗೆ ರಾಗಂ ಅವರ ಅತ್ಯಂತ ಗಂಭೀರ ಲೇಖನಗಳನ್ನು ಒಳಗೊಂಡಿದೆ.