ಕಡಲಾಯಿತು ಕನ್ನಡ

ಕಡಲಾಯಿತು ಕನ್ನಡ

ವಿಮರ್ಶೆ
Apr 2025
ಒಂದೊಂದು ಬೊಗಸೆ ನೀರು ಸೇರುತ್ತ ಸಾಗರವಾಗುವಂತೆ ಎಲ್ಲರ ಸಾಹಿತ್ಯವು ಸೇರುತ್ತೆ ಕನ್ನಡದ ಕಡಲಾಗಿದೆ. ಈ ಕೃತಿಯಲ್ಲಿ ಒಟ್ಟು 26 ಲೇಖನಗಳಿವೆ ಪರಂಪರೆಯಿಂದ ಹಿಡಿದು ವರ್ತಮಾನದವರಿಗೆ ಸಾಹಿತ್ಯದ ದೀಪ್ತಿ ಬೆಳಗಿದ ಮಹಾನ್ ಲೇಖಕರ ಕೃತಿಗಳ ಸಾಹಿತ್ಯದ ಪರಿಚಯವು ವಿಶ್ಲೇಷಣಾತ್ಮಕ ನೆಲೆಯಲ್ಲಿ ಸಂಕಲಿತಗೊಂಡಿದೆ, ಪ್ರಮುಖವಾಗಿ ಕನಕದಾಸ, ರಾಮಪ್ರಸಾದ್ ಬಿಸ್ಮಿಲ್ಲಾ, ರವೀಂದ್ರನಾಥ, ಕುವೆಂಪು, ಕಿರಣ್, ಎಂ.ಎನ್. ವ್ಯಾಸರಾವ್, ಶ್ರೀನಿವಾಸ್, ಜಿ.ಬಿ ಸಜ್ಜನ, ಲಂಕೇಶ ಮತ್ತು ಗೌರಿ ಲಂಕೇಶ, ಕಿಕ್ಕೇರಿ ನಾರಾಯಣ, ಗಿರಡ್ಡಿ, ಬೇಲೂರು ಕೃಷ್ಣಮೂರ್ತಿ, ಚಂದ್ರಕಾಂತ್ ಕುಸನೂರ ಮತ್ತು ಅಬ್ಬಾಸ್ ಮೇಲಿನಮನಿ ಇವರೆಲ್ಲರ ಸಾಧನೆಯ ಕುರಿತ ಲೇಖಕರ ಮಧುರ ನೆನಪಿನ ಪುಟಗಳು ಈ ಕನ್ನಡ ಕಡಲಿನ ಹನಿ ಮುತ್ತುಗಳಾಗಿವೆ. ಕಡಲಿನ ರೂಪದಲ್ಲಿ ವಿಮರ್ಶಾ ಕೃತಿಯ ಶೀರ್ಷಿಕೆ ವಿಶೇಷವಾಗಿ ಗಮನ ಸೆಳೆಯುತ್ತದೆ ನಾಲ್ಕು ದಶಕಗಳ ರಾಗಂ ಅವರ ಸಾಹಿತ್ಯ ಮತ್ತು ಸಂಸ್ಕೃತಿಯೊಂದಿಗೆ ಮುಖಾಮುಖಿಯ ಫಲಶ್ರುತಿಯೇ ಪ್ರಸ್ತುತ ಈ ಲೇಖನಗಳ ಗುಚ್ಛವಾಗಿದೆ.