ಕನ್ನಡಕ್ಕೊಂದು ಕನ್ನಡಿ ಕೃತಿ ಮೂರು ರೀತಿಯ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲುತ್ತದೆ. ವಿವಿಧ ವಿಚಾರ ಸಂಕೀರ್ಣಗಳಲ್ಲಿ ಮಂಡಿಸಿದ ಪ್ರಬಂಧಗಳು, ತಜ್ಞರ ಸಭೆಗಳಲ್ಲಿ ಚರ್ಚಿಸಿದ ಸಾಹಿತ್ಯ ಕೃಷಿ ಹಾಗೂ ಇತರ ಕೃತಿಗಳಿಗೆ ರಾಗಂ ಅವರದು ಬರೆದ ಮುನ್ನುಡಿಗಳ ಮೊತ್ತವೇ ಈ ಕೃತಿ, ಅಂದರೆ, ಕನ್ನಡ ಸಾಹಿತ್ಯ ಆ ಕೃತಿಗಳಿಗೆ ಇವರು ವಿಮರ್ಶೆಯ ಕನ್ನಡಿ ಹಿಡಿದು ಅದನ್ನು ಸಾಹಿತ್ಯಾಸಕ್ತರಿಗೆ ತಲುಪಿಸಿದ್ದಾರೆ. ಈ ಕೃತಿಯು ಒಟ್ಟು 28 ಲೇಖನಗಳ ಸಂಕಲನ.