ಇದೊಂದು ವೈವಿಧ್ಯಮಯವಾದ ವಿಫುಲ ಲೇಖನಗಳ ಸಂಗ್ರಹ. ಒಂದು ರೀತಿಯ ಮಿಸಳಭಾಜಿ. ಕನ್ನಡ ಪುಸ್ತಕ. ನಾಡು-ನುಡಿ ಸಂಸ್ಕೃತಿಯನ್ನು ಆಧರಿಸಿದ ದಿಟ್ಟ ನಿಲುವಿನ 200 ಪುಟಗಳ ಪುಸ್ತಕ. ಖ್ಯಾತ ಲೇಖಕ ಡಾ. ಮಲ್ಲಿಕಾರ್ಜುನ ಹಿರೇಮಠ ಕೃತಿಯ ಮುನ್ನುಡಿಯಲ್ಲಿ ಹೀಗೆ ದಾಖಲಿಸುತ್ತಾರೆ. “ಇಲ್ಲಿಯೂ ಆತ್ಮಕಥಾನಕದ ತುಣುಕುಗಳಿವೆ. ನೀವು ಮೆಚ್ಚಿದ, ನಿಮ್ಮನ್ನು ಗಾಢವಾಗಿ ಪ್ರಭಾವಿಸಿದ ವ್ಯಕ್ತಿಗಳ ಕುರಿತು ಬರೆದಿದ್ದೀರಿ. ಕೃತಿಕಾರ ಮತ್ತು ಕೃತಿಗಳ ವಿವೇಚನೆ ಇದೆ; ಈಗಾಗಲೇ ಹೆಸರು ಮಾಡಿದವರು, ಹೆಸರಾಗದವರು ಸೇರ್ಪಡೆಯಾಗಿದ್ದಾರೆ. ರಂಗಭೂಮಿ ಮತ್ತು ನಾಟಕಗಳ ಕುರಿತ ಬರಹಗಳೂ ಇವೆ. ಆದರೆ ಈ ಸಂಕಲನದ ಲೇಖನಗಳು ವಸ್ತುನಿಷ್ಠ ಬರಹಗಳಲ್ಲ; ಸ್ವನಿಷ್ಠ ಬರಹಗಳು.