ಕನ್ನಡ ಸಾರಸ್ವತ ಲೋಕದ ಇತಿಹಾಸ ಸಾವಿರಾರು ವರ್ಷಗಳದ್ದು, ನಮ್ಮ ಮೊದಲೂ ಹುಟ್ಟಿ, ನಮ್ಮ ನಂತರವೂ ಬೆಳೆಯುವಂಥದ್ದು. ಅದು ನಿಂತ ನೀರಲ್ಲ. ನಿರಂತರ, ಜೀವಪರ ಮತ್ತು ಜಂಗಮ. ಇಂಥ ಜಂಗಮ ಸ್ವರೂಪಿ ಪರಂಪರೆಯನ್ನು ಜಂಗಮನೊಬ್ಬನ ಮೂಲಕ ಗ್ರಹಿಸುವುದು, ಆಸ್ವಾದಿಸುವುದು ಮತ್ತು ದಾಖಲಿಸುವುದನ್ನು ನಾನು ಅರ್ಥಪೂರ್ಣ ಕ್ರಿಯೆ ಎಂದುಕೊಂಡಿದ್ದೇನೆ. ರಾಗಂ ಅಂಥ ಒಂದು ಜಂಗಮ ಮನಸ್ಸು. ಕನ್ನಡದಲ್ಲಿ ಇಂಥವರ ಸಂಖ್ಯೆ ವಿರಳ! ಆದರೆ ಸಿಕ್ಕಷ್ಟನ್ನೇ ಸಂಗ್ರಹಿಸಿ ಕೊಟ್ಟರೆ ನಮ್ಮ ಸಾಹಿತ್ಯಾಧ್ಯಯನದ ಅನೇಕ ತಪ್ಪು ಗ್ರಹಿಕೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿಯ ಒಂದು ಪ್ರಯತ್ನ ಈ ಮಾಲಿಕೆ.