ಹೆಣ್ಣು ಹೇಳುವ ಅರ್ಧ ಸತ್ಯ, ಕಣ್ವ ಪ್ರಕಾಶನ, ಬೆಂಗಳೂರು-೨೦೧೪
ರಾಗಂ ಅವರ ಮಹತ್ವದ ರಚನೆ. ಸ್ತಿçÃವಾದಿ ಬರಹಗಳಲ್ಲಿ ಮಹತ್ವದ ಕೃತಿ. ಇದೊಂದು ರೀತಿ ಕನ್ನಡದ ಮೂಲ ಚಲನೆಯಾದ ಗಪದ್ಯ (ಗದ್ಯ-ಪದ್ಯ)ದ ರೂಪದಲ್ಲಿದೆ. ರಾಗಂ ಸಂಪರ್ಕಕ್ಕೆ ಬಂದ ಇವರೆಲ್ಲಾ ಸಭ್ಯತೆಯ ಚೌಕಟ್ಟಿನಲ್ಲಿಯೇ ಸುಳಿಯದ, ಯಾವುದೋ ಭ್ರಮೆಗಾಗಿ ತಮ್ಮನ್ನೇ ಸುಟ್ಟುಕೊಂಡ ಮಹಿಳೆಯರು. ರಾಗಂ ಬರೆಯುವಂತೆ “ದೀಪವನ್ನು ಸುತ್ತುವ ಪತಂಗಕ್ಕೂ, ನೆಲ-ನವಿಲ್ಲದ ಭ್ರಮೆಯನ್ನು ಸುತ್ತಿದ ಇವರಿಗೂ ಬಹಳ ವ್ಯತ್ಯಾಸವಿಲ್ಲ. ನನಗೆ ಗೊತ್ತು, ಸಭ್ಯ ಸಮಾಜದ ಯಾವುದೇ ನ್ಯಾಯಿಕ ವ್ಯವಸ್ಥೆ ಇವರನ್ನು ಆದರ್ಶ ಪ್ರಾಯರು ಎಂದು ಘೋಷಿಸಲು ಸಾಧ್ಯವಿಲ್ಲ. ಮೋಜಿನ ಸಂಗತಿಯೆAದರೆ ನಿಮ್ಮ WಇಂAµAuಇUAಳನ್ನು ಈ ಸಾಕಿಯರು ಮನ್ನಿಸಲೂ ಇಲ್ಲ. ‘ಸಭ್ಯತೆ’ ಎನ್ನುವ ಏರಿನಲ್ಲಿ ನಾವು ಬದುಕಿದರೆ, ಪ್ರಾಮಾಣಿಕತೆ ಎಂಬ ತೇರಿನಲ್ಲಿ ಕುಳಿತು ಸಮಾಜ-ಸಂಸಾರಗಳ ಹುಸಿ ಹರಕೆಗಳ ಕೇಳಿ, ಇಣುಕಿ ನೋಡಿ ಸಾಗಿ ಹೋದವರು ಈ ಸಾಕಿಯರು.
ನಮ್ಮ ಒಂದು ಬದುಕಂತೂ ಇವರ ಸುಖವರಿಯದೇ ಸೊರಗಿ ಹೋಯಿತು. ಬರುವ ನಮ್ಮ ಇನ್ನೊಂದು ಬದುಕಿಗಾದರೂ ಇವರನ್ನು ಅರ್ಥೈಸಿಕೊಳ್ಳುವುದು ಅರ್ಥಪೂರ್ಣ ಎಂದುಕೊಳ್ಳೋಣವೇ?
ಈ ಕಥಾ ಸಂಕಲನ ಸೆಕ್ಸ್ ವರ್ಕರ್‌ಗಳ ನೋವು, ಸಂಕಟ, ತಳಮಳ, ತಲ್ಲಣ, ಕ್ರೌರ್ಯ, ಹಿಂಸೆ, ಅವಮಾನ, ಅಸಹಾಯಕತೆ, ಶೋಷಣೆ, ಅಭದ್ರತೆ, ಕೀಳರಿಮೆ, ತಿರಸ್ಕಾರ, ಹಿಂಸೆಗಳನ್ನು ಹೊತ್ತು ತಂದಿದೆ. ಇಲ್ಲಿ ತನ್ನದೇ ಊರಿನವರಾದ ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದ ೧೨ ಜನ ಸೆಕ್ಸ್ ವರ್ಕರ್‌ಗಳ ಜೀವನ ಕಥೆಗಳನ್ನು ಬರೆದಿದ್ದಾರೆ. ಇವರನ್ನೆಲ್ಲ ಬಹಳ ಹತ್ತಿರದಿಂದ ಕಂಡಿದ್ದ ರಾಗಂ ಅವರಿಗೆ, ಅವರ ಬದುಕಿನ ಕರಾಳ ಸತ್ಯಗಳ ಅನುಭವ ನಿಜವಾಗಿ ದಕ್ಕಿತು. ಇದು ಈ ಕೃತಿಯ ಸತ್ಯಾಸತ್ಯತೆಗೆ ದಾರಿಯಾಯಿತು. ಇಲ್ಲಿರುವ ಮಹಿಳೆಯರು ಇವರ ತಾಯಿಯ ವಯಸ್ಸಿನವರಾಗಿದ್ದು ಒಬ್ಬ ಮಹಿಳೆ ಅನಾಥಳಾಗಿ ಅಸಹಾಯಕಳಾಗಿ ನೆಲೆ ಕಳೆದುಕೊಂಡಾಗ ರಾಗಂ ಅವರ ಮನೆ ಅವರಿಗೆ ಆಶ್ರಯ ನೀಡಿತು ಎಂಬ ವಿಚಾರ ಇವರ ಕುಟುಂಬದ ಮಾನವೀಯ ನೋಟ ಮತ್ತು ಅಂತಃಕಣವು ಸೋಜಿಗವನ್ನುಂಟು ಮಾಡುತ್ತದೆ.
ಯಾವುದೇ ಮಹಿಳೆ ದೈಹಿಕ ಸುಖ ಬಯಸಿ ಈ ಕೆಲಸವನ್ನು ಮಾಡುವುದಿಲ್ಲ ಸಮಾಜದ ಕ್ರೌರ್ಯ ಅನಿಷ್ಟ ಆಚರಣೆ ಬದುಕಿನ ಅನಿವಾರ್ಯತೆ ಸಮಯ ಸಂದರ್ಭಗಳು ಅವಳನ್ನು ಈ ದಂಡೆಗೆ ದೂಡುತ್ತವೆ. ಅದನ್ನು ಸಾಕ್ಷೀಕರಿಸುವಲ್ಲಿ ಈ ಕಥೆಗಳು ಗಟ್ಟಿಯಾದ ಸ್ಥಾನವನ್ನು ಪಡೆಯುತ್ತವೆ. ಸ್ತಿçà ಸಂವೇದನೆಗಳ ಅನಾವರಣ ರಾಗಂ ಬರಹದಲ್ಲಿ ಯಥೇಚ್ಛವಾಗಿದೆ