ವೀರಲೋಕ ಇತ್ತೀಚಿಗೆ ಲೋಕಾರ್ಪಣೆಗೊಳಿಸಿದ ಎಂಟು ಪುಸ್ತಕಗಳಲ್ಲಿ ಶೀರ್ಷಿಕೆಯಿಂದಲೇ ನನ್ನನ್ನು ಆಕರ್ಷಿಸಿದ್ದು ರಾಗಂ ಆವರ ಕಥಾಸಂಕಲನ 'ಸುಪಾರಿ ಸ್ವಾಮಿ ಮತ್ತು ಸಕೀನಾ. ಮುಖಪುಟವೂ ಅಷ್ಟೇ ಆಕರ್ಷಕವಾಗಿದೆ.
ಈ ಕಥಾ ಸಂಕಲನದಲ್ಲಿ ಬಿಜಾಪುರ ಮತ್ತು ಇಂಡಿ ಭಾಗದ ಸ್ಥಳೀಯ ಭಾಷೆ ಬಳಸಿದ್ದಾರೆ.
ಒಟ್ಟು ಏಳು ಕಥೆಗಳಲ್ಲಿ 'ಸುಪಾರಿ ಸ್ವಾಮಿ ಮತ್ತು ಸಕೀನಾ' ನೇ ಮೊದಲ ಕತೆ. ಅವರಿಬ್ಬರ ನಡುವಿನ ಸಂದೇಶ ವಿನಿಮಯಗಳ ಸಾಂಕೇತಿಕ ಭಾಷೆ ಜೇಮ್ಸ್ ಬಾಂಡ್ ಚಿತ್ರಗಳನ್ನು ನೆನಪಿಸಿತು.
ಉಪಕಾರ ಸ್ಮರಣೆ ಈ ನೆಲದ ಸಂಸ್ಕೃತಿ. ಎಂದೋ ಮಾಡಿದ ಉಪಕಾರ ನಮ್ಮನ್ನು ಯಾವುದಾದರೂ ರೂಪದಲ್ಲಿ ಕಾಪಾಡುತ್ತದೆ ಎನ್ನುವುದು ಇಲ್ಲಿಯ ನಂಬಿಕೆ.ಈ ಕಥನಗಳಲ್ಲಿ ಬರುವ ಪಾತ್ರಗಳ ಪರಿಚಯ ವಿಶಿಷ್ಟವಾಗಿದೆ, ಬಳಸಿದ ಭಾಷೆ, ಓದಿದವರಿಗೆ ಖುಷಿ ಕೊಡುತ್ತದೆ. ಪಾತ್ರ ವಿವರಣೆ ಕಣ್ಣಿಗೆ ಕಟ್ಟುವಂತಿದೆ.
ಇಲ್ಲಿನ ಕತೆಗಳಲ್ಲಿ ಸಾಮರಸ್ಯ , ಸೌಹಾರ್ದತೆಯನ್ನು ಪ್ರತಿನಿಧಿಸುವ ಅಂಶಗಳಿವೆ. ಅಲ್ಲದೇ ಕತೆ ಬರೆಯಬೇಕು ಎನ್ನುವವರಿಗೆ ಒಂದೆರಡು ನಿಯಮಗಳನ್ನು ರಾಗಂ ಅವರು ಹೇಳಿದ್ದಾರೆ. ಓದಿದರೆ ಕತೆಗಾರರಾಗಬಹುದು.