ಅಳಲು

ಅಳಲು

ಕಥೆ
Nov 2025
ಅಳಲು, ಕಲಾಗಂಗಾಧರ ಪ್ರಕಾಶನ, ಚಡಚಣ-೧೯೯೧ ಕಬೀರನ ಕಾವ್ಯವನ್ನು ಕುರಿತು ವಿಶೇಷ ಅಧ್ಯಯನ ಮಾಡಿದ ಪ್ರೊ. ಜಮಾದಾರ ಅವರ ಮುನ್ನುಡಿಯಿಂದ ಆರಂಭವಾಗುವ ಈ ಕೃತಿ, ರಾಗಂ ಬರೆದ ೧೨ ಕಥೆಗಳ ಸಂಕಲನ. `೪೩ ರ ರಾತ್ರಿ' `ಪಾರಿಜಾತ' ಈ ಸಂಕಲನದ ಬಹು ಚರ್ಚಿತ ಎರಡು ಕಥೆಗಳು. ವಯೋ ಸಹಜವಾದ ಸಿಟ್ಟು, ವ್ಯವಸ್ಥೆಯ ವಿರುದ್ಧ ಆಕ್ರೋಶ ಕೃತಿಯುದ್ದಕ್ಕೂ ಅಲ್ಲಲ್ಲಿ ಸ್ಫೋಟಗೊಳ್ಳುತ್ತದೆ. ಇವು ವಾಸ್ತವತೆಗೆ ಕನ್ನಡಿ ಹಿಡಿಯುವ ಕಾಲ್ಪನಿಕ ಕಥೆಗಳು. ನಾಲ್ಕು ದಶಕಗಳ ರಾಗಂ ಬರಹದ ದಾರಿಯಲ್ಲಿ ಅಳಲು ಒಂದು ಅಪರೂಪದ ನೆನಪು