ಇಟಲಿಯಲ್ಲಿರುವ ಕೀಟ್ಸನ ಸಮಾಧಿಯ ಮೇಲಿನ ಸಾಲನೆ ಇಲ್ಲಿ ಭಾಷಾಂತರಿಸಿ 'ನೀರ ಮೇಲೆ ನೆನಪ ಬರೆದು' ಎಂದು ಶೀರ್ಷಿಕೆಯನ್ನು ಇಡಲಾಗಿದೆ. ಇದರ ಮುನ್ನುಡಿಯನ್ನು ಖ್ಯಾತ ಲೇಖಕರಾದ ಹಾಗೂ ರಾಗಂ ಅವರ ನೇರ ಗುರುಗಳಾದ ಡಾ. ಆರ್ ಕೆ ಕುಲಕರ್ಣಿ ಅವರು ಬರೆದಿದ್ದಾರೆ. ಅವರು ಹೇಳುವಂತೆ, "ಕೀಟ್ಸ್ ಓರ್ವ ಇಂದ್ರಿಯಾನಂದದ ಅನುಭಾವಿ. ಅವನ ಮಾತುಗಳು ಸಂತನಾಡುವ ಮಾತುಗಳಂತಿವೆ. ಈ ಆಧ್ಯಾತ್ಮಿಕ ಆತ್ಮ ಭಾವದ ಒಳ ಹರಿವನ್ನು ಕೀಟ್ಸ್‌ನ ಕಾವ್ಯದಲ್ಲಿ ಗುರುತಿಸಿದಂತೆ ರಾಗಂ ಅವರು ಅವನ ಪತ್ರಗಳಲ್ಲಿಯೂ ಗುರುತಿಸಿದ್ದಾರೆ. ಕೀಟ್ಸನ ಕುರಿತ ಈ ಪುಸ್ತಕ ಇನ್ನೂ ವಿಸ್ತತ ಸ್ವರೂಪದಲ್ಲಿ ಪ್ರಕಟವಾಗಬೇಕಿದೆ. ಕೀಟ್ಸ್‌ನ ಈ ದುರಂತ ಬದುಕಿನ ಜಾಡು ಹಿಡಿದು ರಾಗಂ ಸಾಗಿದ್ದು ವಿಸ್ಮಯ ಎನಿಸುತ್ತದೆ. ಕಾಲಜನ್ಯ ಸಂತಸ ನೀಡುತ್ತದೆ. ಕೀಟನ ಹೃದಯ ಧವಳ ಗಂಗೋತ್ರಿ, ಕಾವ್ಯಾಸಕ್ತರೆಲ್ಲರೂ ಕೀಟ್ಸ್‌ನನ್ನು ಓದುವ ಅವಶ್ಯಕತೆ ಇದೆ.