ಟ್ಯಾಗೋರರು ರಾಷ್ಟ್ರವಾದಿಗಳಾಗಿರಲಿಲ್ಲ. ಅವರ ನಂಬಿಕೆ ವಿಶ್ವಮಾನವ ಸಂದೇಶವಾಗಿತ್ತು. ಜಾಗತಿಕ ಸರ್ಕಾರ ಅವರ ಗುರಿಯಾಗಿತ್ತು. ಯುದ್ಧಗಳ ತೀವ್ರ ವಿರೋಧಿಯಾಗಿದ್ದರು. ರಾಷ್ಟ್ರ ಪರಿಕಲ್ಪನೆ ಮನುಷ್ಯರನ್ನು ವಿಭಜಿಸಿ ಸಂಕುಚಿತರನ್ನಾಗಿಸುತ್ತದೆ ಎನ್ನುವುದು ಅವರ ವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಒಟ್ಟು ಸಾಹಿತ್ಯ ರಚನೆಯಾಗಿದೆ. ಅವರ ಕಥೆ, ಕಾದಂಬರಿ, ಕಾವ್ಯ ಎಲ್ಲವೂ ಕೂಡ ಇದೇ ವಿಚಾರವನ್ನು ಪ್ರತಿಪಾದಿಸುತ್ತವೆ. ಭಾರತಕ್ಕೆ ನೋಬೆಲ್ ತಂದುಕೊಟ್ಟ ಅವರ 'ಗೀತಾಂಜಲಿ'ಯು ಕೂಡ ಸೃಷ್ಟಿಕರ್ತನಿಗೆ ಕೊಟ್ಟ ಅತಿದೊಡ್ಡ ಕಾವ್ಯ ಗೌರವವಾಗಿದೆ. ಪ್ರಸ್ತುತ ರಾಗಂ ಅವರ ಇಂಗ್ಲಿಷ್ ಕೃತಿಯಲ್ಲಿ ಗುರುದೇವ್ ಟ್ಯಾಗೋರರ ಜೀವನ ಸಾಹಿತ್ಯ ಹಾಗೂ ಅವರ ಸಾಹಿತ್ಯದಲ್ಲಿ ಇರುವ ರಾಷ್ಟ್ರವಾದವನ್ನು ಕುರಿತು ಚರ್ಚಿಸಲಾಗಿದೆ. ಒಟ್ಟು ಏಳು ಅಧ್ಯಾಯಗಳ 125 ಪುಟಗಳ ಈ ಕೃತಿಯಲ್ಲಿ ಟ್ಯಾಗೋರ ಜೀವನ ಹಾಗೂ ಕಾವ್ಯ ಸಂದೇಶವನ್ನು ಸಂಗ್ರಹಿಸಲಾಗಿದೆ.